ಮುಖಪುಟ › ಶಾಲಾ ERP
ಕರ್ನಾಟಕದ ಶಾಲೆಗಳಿಗೆ ಶಾಲಾ ERP, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ
ಜಶ್ಚರ್ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ತಯಾರಾದದ್ದು. ಒಮ್ಮೆ ವಿದ್ಯಾರ್ಥಿಯನ್ನು ಸೇರಿಸಿ: ಶುಲ್ಕ, ರಿಯಾಯಿತಿ, ಬಸ್, ಪೋಷಕರ ಲಾಗಿನ್, ಸಂದೇಶಗಳು ತಾನಾಗಿಯೇ ಶುರುವಾಗುತ್ತವೆ. ಕಚೇರಿಯ ಒಬ್ಬರು ಹತ್ತು ಜನರ ಕೆಲಸ ಮಾಡುತ್ತಾರೆ.
ಏನು ಮಾಡುತ್ತದೆ
ಶುಲ್ಕ ತಾನಾಗಿಯೇ ಬಿಲ್
ತರಗತಿಯ ಶುಲ್ಕ, ರಿಯಾಯಿತಿ, ಬಸ್ ಶುಲ್ಕ ಅಡ್ಮಿಷನ್ ಆದ ಕೂಡಲೇ; ರಸೀದಿ ಮತ್ತು ಬಾಕಿ ನೆನಪು ತಾನಾಗಿಯೇ.
ಇನ್ನಷ್ಟು ಓದಿ →ಹಾಜರಾತಿ ತಾನಾಗಿಯೇ
ಗೇಟ್, ಬಸ್, ಹಾಸ್ಟೆಲ್‌ನಲ್ಲಿ ಮುಖ ಗುರುತಿಸುವ ಯಂತ್ರ; ಮಗು ಶಾಲೆ ತಲುಪಿದ್ದು ಪೋಷಕರಿಗೆ ಗೊತ್ತಾಗುತ್ತದೆ.
ಇನ್ನಷ್ಟು ಓದಿ →ಪೋಷಕರ ಆ್ಯಪ್ ಮತ್ತು WhatsApp
ಹೋಂವರ್ಕ್, ಶುಲ್ಕ, ಹಾಜರಾತಿ, ಸುತ್ತೋಲೆ ಪೋಷಕರ ಮೊಬೈಲ್‌ಗೆ: ಆ್ಯಪ್‌ನಲ್ಲಿ ಉಚಿತ, WhatsApp ಶಾಲೆಯ ಸ್ವಂತ ಸಂಖ್ಯೆಯಿಂದ.
ಇನ್ನಷ್ಟು ಓದಿ →ಉತ್ತರ ಪತ್ರಿಕೆಗೆ JashMark AI
ಸ್ಕ್ಯಾನ್ ಮಾಡಿದ ಉತ್ತರ ಪತ್ರಿಕೆಯನ್ನು AI ಓದಿ ಕಾರಣ ಸಹಿತ ಅಂಕ ಸೂಚಿಸುತ್ತದೆ; ನಿರ್ಧಾರ ಶಿಕ್ಷಕರದ್ದು.
ಇನ್ನಷ್ಟು ಓದಿ →ಎಲ್ಲಾ ಬಸ್‌ಗಳು ನಕ್ಷೆಯಲ್ಲಿ
ಪ್ರತಿ ಬಸ್‌ನಲ್ಲಿ GPS; ಬಸ್ ಬರುತ್ತಿರುವುದು ಪೋಷಕರಿಗೆ ಕಾಣುತ್ತದೆ, ಮಗು ಹತ್ತಿದ್ದು ಇಳಿದದ್ದು ತಿಳಿಯುತ್ತದೆ.
ಇನ್ನಷ್ಟು ಓದಿ →JASH, ಕನ್ನಡದಲ್ಲಿ ಸಹಾಯಕ
"ಇಂದು ಎಷ್ಟು ಶುಲ್ಕ ಬಂತು?", "7 A ಯಲ್ಲಿ ಯಾರು ಗೈರು?" ಎಂದು ಕೇಳಿ; ನಿಮ್ಮ ಶಾಲೆಯ ಮಾಹಿತಿಯಿಂದಲೇ ಉತ್ತರ.
ಹೇಗೆ ಶುರು
- ಉಚಿತ ಡೆಮೊ ಬುಕ್ ಮಾಡಿ: ಆನ್‌ಲೈನ್‌ನಲ್ಲಿ, ಅಥವಾ ನಿಮ್ಮ ಶಾಲೆಗೇ ಬಂದು ನಿಮ್ಮ ಕೆಲಸವನ್ನೇ ತೋರಿಸುತ್ತೇವೆ.
- ವಿದ್ಯಾರ್ಥಿಗಳ Excel ಕಳುಹಿಸಿ: ಮಾಹಿತಿ ಸೇರುತ್ತದೆ, ತರಗತಿ, ಶುಲ್ಕ, ಬಸ್ ಒಮ್ಮೆ ಹೊಂದಿಸಲಾಗುತ್ತದೆ.
- ಸಿಬ್ಬಂದಿ ಕನ್ನಡ ಮತ್ತು ಇಂಗ್ಲಿಷ್ ಸಣ್ಣ ವಿಡಿಯೋಗಳಿಂದ ಕಲಿಯುತ್ತಾರೆ; ನಂತರ ಕೆಲಸ ತಾನಾಗಿಯೇ ನಡೆಯುತ್ತದೆ.
ಪ್ರಶ್ನೆಗಳು
ಜಶ್ಚರ್ ಕನ್ನಡದಲ್ಲಿ ಇದೆಯೇ?
ಸಹಾಯಕ JASH ಕನ್ನಡದಲ್ಲಿ ಉತ್ತರಿಸುತ್ತದೆ, ತರಬೇತಿ ವಿಡಿಯೋಗಳು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿವೆ. ಕಚೇರಿಯ ಪುಟಗಳು ಸರಳ ಇಂಗ್ಲಿಷ್‌ನಲ್ಲಿವೆ.
ಯಾವ ಪಠ್ಯಕ್ರಮ, ಯಾವ ಶಾಲೆಗಳಿಗೆ?
ರಾಜ್ಯ ಪಠ್ಯಕ್ರಮ, CBSE, ICSE ಶಾಲೆಗಳು ಮತ್ತು PU ಕಾಲೇಜುಗಳು: ಒಂದು ಶಾಲೆ, ಅಥವಾ ಹಲವು ಶಾಖೆಗಳಿರುವ ಟ್ರಸ್ಟ್ ಒಂದೇ ಲಾಗಿನ್‌ನಲ್ಲಿ.
ಬೆಲೆ ಎಷ್ಟು?
ವಿದ್ಯಾರ್ಥಿಗಳ ಸಂಖ್ಯೆ ಮತ್ತು ತೆಗೆದುಕೊಳ್ಳುವ ಮಾಡ್ಯೂಲ್‌ಗಳ ಮೇಲೆ. ಡೆಮೊ ನಂತರ ಲಿಖಿತ ಕೊಟೇಷನ್ ಕಳುಹಿಸುತ್ತೇವೆ; ಉಚಿತ ಟ್ರಯಲ್‌ನಿಂದಲೂ ಶುರು ಮಾಡಬಹುದು.
ನಮ್ಮ ಮಾಹಿತಿ ಎಲ್ಲಿರುತ್ತದೆ?
ಭಾರತದಲ್ಲೇ (ಮುಂಬೈ) ಜಶ್ಚರ್‌ನ ಸ್ವಂತ ಸರ್ವರ್‌ನಲ್ಲಿ, ಬ್ಯಾಕಪ್ ಜೊತೆ. ಪ್ರತಿ ಶಾಲೆಗೆ ತನ್ನ ಮಾಹಿತಿ ಮಾತ್ರ ಕಾಣುತ್ತದೆ.
45 ನಿಮಿಷದ ಉಚಿತ ಡೆಮೊ: ಆನ್‌ಲೈನ್‌ನಲ್ಲಿ, ಅಥವಾ ನಿಮ್ಮ ಶಾಲೆಗೇ ಬಂದು.
